Thursday, June 25, 2009
ಆರಂಭ ಹೀಗೇನೆ ಅಲ್ವ?
ಮನಸ್ಸಿನಲ್ಲಿ ಅಂದುಕೊಂಡಿದ್ದು ಕಾರ್ಯಕ್ಕೆ ಬರಲೇ ಬೇಕು ಅಂತ ಏನೂ ಇಲ್ಲ ಅಲ್ವ? ಹೌದು ಅಂದ್ರ? ಅಲ್ಲೇನೆ ನೀವು-ನಾವು ತಪ್ಪು ಮಾಡೋದು. ಯಾಕೆ ಆಗೋದಿಲ್ಲ ಬಾಸ್? ಆಗೋದಿಲ್ಲ ಅಲ್ವ? ಆಗುತ್ತ ಇಲ್ವಾ? ಸರಿ ಸ್ವಲ್ಪ ಹೊತ್ತು ಯೋಚನೆ ಮಾಡಿ. ಈಗ ಹೇಳಿ ಆಗುತ್ತೋ ಇಲ್ವೋ? ಒಂದು ವಿಷಯದ ಬಗ್ಗೆ ಕೊನೆಯ ತೀರ್ಮಾನ ತೆಗೆದುಕೊಳ್ಳೋದು ಎಷ್ಟು ಕಷ್ಟ ಅಂತ ಅರ್ಥ ಆಯೀತ? ಅದ್ರು ಕೆಲವರು ಹೇಗೆ ಅಂದುಕೊಂದನ್ನು ಮಾಡಿ ಮುಗಿಸ್ತಾರೆ ಅಂದ್ರೆ ನಮಗೆ ಆಶ್ಚರ್ಯ ಆಗುತಲ್ಲ? ಜೀವನದಲ್ಲಿ ಗುರಿ ಮುಖ್ಯ ಅಂತಾರೆ . ಆದ್ರೆ ಗುರಿಯನ್ನು ನಿಗದಿಮಾಡೋದು ಅದೆಸ್ತು ಕಷ್ಟ ಅಂತ ನಿಮಗೂ ಗೊತ್ತಲ್ಲ? ನಿಜವಾಗಿ ನೋಡಿದ್ರೆ ಹಾಗೆ ಹೇಳೋರು ಸುಮ್ನೆ ಹೇಳಿರುತ್ತಾರೆ. ನಾನು ಹೀಗೆ ಆಗ್ಬೇಕು ಅಂತ ಡಿಸೈಡ್ ಮಾಡೋದು ತುಂಬಾನೇ ಕಷ್ಟ.
Subscribe to:
Post Comments (Atom)
No comments:
Post a Comment