ಅಬ್ಬಬ್ಬಾ... ಹೀಗೂ ಉಂಟೆ? ಅಂತ ಅನ್ನಿಸದೆ ಇರದು. ಎಲ್ಲಿಂದ ಎಲ್ಲಿಗೆ ಬಂದೆ ಅಂತ ಒಮ್ಮೆ ತಿರುಗಿ ನೋಡಿದ್ರೆ ಆಶ್ಚರ್ಯ ಆಗುತ್ತೆ! ಮನಸಿನಲ್ಲಿ ಮೂಡುತಿದ್ದ ನೂರಾರು ಬಗೆಯ ಆಲೋಚನೆನೆಗಳಿಗೆ ಕೊನೆಗೂ ಒಂದು ಆಯಾಮ ಸಿಕ್ಕಿದೆ ಅಂತ ಕಾಣುತ್ತೆ.. ಅದೇ ನರಕ(?) ದಲ್ಲಿ ಈ ಒಂದು ವರ್ಷ ಕಳೆಯಬೇಕೋ ಅಂತ ಭಯ ಪಟ್ಟಿದ್ದೆ.. ಕೊನೆಗೂ ಎಲ್ಲವನ್ನು ಕಡೆಗಣಿಸಿ, ಕರುಣೆ, ಕಮಿಟ್ಮೆಂಟ್ , ಅನ್ನೋ ಪದಗಳ ಅರ್ಥಗಳನ್ನೂ ಮರೆತು ಇಲ್ಲಿಗೆ ಬಂದಾಯಿತು.. ನನ್ನ ಬಗ್ಗೆ ಇನ್ನೊಬ್ರು ಏನು ಹೇಳ್ತಾರೆ ಮುಖ್ಯ ಅಲ್ಲ.. ನನ್ನ ಬದುಕಿಗೆ ಯಾವುದು ಮುಖ್ಯ ಅನ್ನೋ ಸತ್ಯ ಇನ್ನಾದ್ರು ನಂಗೆ ಗೊತ್ತಗಿದ್ಯಾ? ಶಿಕ್ಷಕ ವೃತ್ತಿ ಯನ್ನು ಒಂದೊಮ್ಮೆ ಇಷ್ಟ ಪಟ್ಟವ ನಾನು. ಆ ವೃತ್ತಿಯಲ್ಲಿ ಏನೇನೋ ಕಲ್ಪನೆಗಳನ್ನು ಇಟ್ಟುಕೊಂಡಿದ್ದವನಾನು. ಆದರೆ ಆ ಎಲ್ಲ ಮುನ್ನೆಚ್ಚರಿಕೆಗಳು ಮೊದಲನೆಯ ದಿನವೇ ಸೋಲಪ್ಪಿದವು. ದಿನೇ ದಿನೇ ಮನಸ್ಸು ನೊಂದು ಹೋಯಿತೇ ವಿನಃ ಸುದಾರಿಕೆಯ ಸೂಚನೆ ಕಂಡು ಬರಲೇ ಇಲ್ಲ.. ಸಮಸ್ಯೆ ಯನ್ನು ಗೆದ್ದು ಬರೋದು ಅಸ್ತು ಸುಲ್ಬವಾಗಿರಲಿಲ್ಲ.. ಮನಸ್ಸು ಜವಾಬ್ದಾರಿ ಹೊರಲು ತಯಾರಿರಲಿಲ್ಲ.. ಬದಲಾವಣೆ ತರಲು ಒಪ್ಪಲಿಲ್ಲ.. ಮನಸ್ಸು ಸಂತೋಷವಗಿಲ್ಲಂದ್ರೆ ಏನು ಮಾಡೋಕೆ ಸದ್ಯ?? ಅಲ್ಲಿದ್ದು ಏನು ಪ್ರಯೋಜನ? ಬದಲಾವಣೆ ಬೇಕಿತ್ತು.. ಎದ್ದುಕೊಂಡು ಬಂದು ಬಿಟ್ಟೆ..!!
Tuesday, November 17, 2009
Wednesday, July 22, 2009
mಅಡಿಕೆರಿಯಲ್ಲಿ ನನ್ನ ಬದುಕು ಹೀಗೆ ಚಿಗುರೊಡೆಯುತ್ತಾ ಇದೆ ..........
ಜೀವನದ ೨ನೆಯ ಅಧ್ಯಾಯ ಹೀಗೆ ಆರಂಭ ಆಗ್ತಾ ಇದೆ. ಅಂದುಕೊಂಡ ಹಾಗೆ ಯಾವುದೂ ಆಗಲ್ಲ ಅಂದಿದ್ದೆ . ತಪ್ಪು ನಮ್ಮದೇ ಕಣ್ರೀ . ನಮ್ಮಲ್ಲಿ ಒಂದು ಧೃಡ ನಿರ್ಧಾರ ಅನ್ನುವನ್ಥದೊಂದು ಇಲ್ಲವೇ ಇಲ್ಲ. ನಾವು ಏನು ಆಗಬೇಕು ಅಂತ ನಮಗೆ ಗೊತ್ತಿರಲ್ಲ . ಏನು ಆಗಬೇಕು ಅಂತ ನಂಬೆ ಗೊತ್ತಿರಲ್ಲ. ಗೊತ್ತಿದ್ರು ಆ ರೀತಿ ಆಗಲು ಪ್ರಯತ್ಣನೆ ಪಡಲ್ಲ. ಕೊನೆಗೆ ಏನೇನೂ ಅಗ್ಬಿತ್ತು ಅದರಲ್ಲೇ ಸಂತೋಷ ಪಡ್ತೇವೆ.
ನಾನೂ ಈಗ ಹೇಳಿಕೇಳಿ ಲೆಕ್ಚರರ್. ನಂಗೆ ಹಾಗೆ ಆಗಿರುವಂತೆ ಅನ್ನಿಸ್ತಾನೆ ಇಲ್ಲ. ಪಾಪ ಮಕ್ಕಳು ಅದ್ಯಾಕೋ ಸಲ್ಯೂಟ್ ಮಾಡ್ತಾನೆ ಇರ್ತಾರೆ.. !! ನಾನು ಅದನ್ನು ಸ್ವೀಕರಿಸ್ತನೆ ಒಂದು ತರದ ಖುಷಿ ಅನುಭವಿಸ್ತೇನೆ..
ಅಂತು ಜೀವನದ ೨ನೆ ಅಧ್ಯಾಯ ಆರಂಭ ಆಗಿದೆ... ವಾತಾವರಣಕ್ಕೆ ಹೊಂದಿ ಕೊಂದ್ದಿದ್ದೇನೆ . ತರಗತಿಗಳು ಗತಿ ಪಡೆದು ಕೊಳ್ತಾ ಇವೆ..

Thursday, June 25, 2009
ಆರಂಭ ಹೀಗೇನೆ ಅಲ್ವ?
ಮನಸ್ಸಿನಲ್ಲಿ ಅಂದುಕೊಂಡಿದ್ದು ಕಾರ್ಯಕ್ಕೆ ಬರಲೇ ಬೇಕು ಅಂತ ಏನೂ ಇಲ್ಲ ಅಲ್ವ? ಹೌದು ಅಂದ್ರ? ಅಲ್ಲೇನೆ ನೀವು-ನಾವು ತಪ್ಪು ಮಾಡೋದು. ಯಾಕೆ ಆಗೋದಿಲ್ಲ ಬಾಸ್? ಆಗೋದಿಲ್ಲ ಅಲ್ವ? ಆಗುತ್ತ ಇಲ್ವಾ? ಸರಿ ಸ್ವಲ್ಪ ಹೊತ್ತು ಯೋಚನೆ ಮಾಡಿ. ಈಗ ಹೇಳಿ ಆಗುತ್ತೋ ಇಲ್ವೋ? ಒಂದು ವಿಷಯದ ಬಗ್ಗೆ ಕೊನೆಯ ತೀರ್ಮಾನ ತೆಗೆದುಕೊಳ್ಳೋದು ಎಷ್ಟು ಕಷ್ಟ ಅಂತ ಅರ್ಥ ಆಯೀತ? ಅದ್ರು ಕೆಲವರು ಹೇಗೆ ಅಂದುಕೊಂದನ್ನು ಮಾಡಿ ಮುಗಿಸ್ತಾರೆ ಅಂದ್ರೆ ನಮಗೆ ಆಶ್ಚರ್ಯ ಆಗುತಲ್ಲ? ಜೀವನದಲ್ಲಿ ಗುರಿ ಮುಖ್ಯ ಅಂತಾರೆ . ಆದ್ರೆ ಗುರಿಯನ್ನು ನಿಗದಿಮಾಡೋದು ಅದೆಸ್ತು ಕಷ್ಟ ಅಂತ ನಿಮಗೂ ಗೊತ್ತಲ್ಲ? ನಿಜವಾಗಿ ನೋಡಿದ್ರೆ ಹಾಗೆ ಹೇಳೋರು ಸುಮ್ನೆ ಹೇಳಿರುತ್ತಾರೆ. ನಾನು ಹೀಗೆ ಆಗ್ಬೇಕು ಅಂತ ಡಿಸೈಡ್ ಮಾಡೋದು ತುಂಬಾನೇ ಕಷ್ಟ.
Subscribe to:
Posts (Atom)